ಮುದ್ದುರಾಮ ಪ್ರತಿಷ್ಠಾನ
ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ, ಮೌಲ್ಯಾಧಾರಿತ ಶಿಕ್ಷಣ ಮುಂತಾದ ಪ್ರಕಾರಗಳಲ್ಲಿ, ವಿಶೇಷವಾಗಿ ಚೌಪದಿ/ತ್ರಿಪದಿ ಸಾಹಿತ್ಯ ಪ್ರಸಾರದಲ್ಲಿ ಗಣನೀಯ ಸೇವೆಸಲ್ಲಿಸಿ, ಸಮಾಜ ಮತ್ತು ಸಂಸ್ಕೃತಿವರ್ಧನೆಯಲ್ಲಿ ಕಾರ್ಯವೆಸಗುತ್ತಿರುವ ಮಹನೀಯರಿಗೆ ಪ್ರತಿಷ್ಠಾನವು ಪ್ರಶಸ್ತಿ/ಪುರಸ್ಕಾರ ನೀಡುತ್ತದೆ. ಈ ಹಾದಿಯಲ್ಲಿ ಕಾರ್ಯವೆಸಗುತ್ತಿರುವ ಮಹನೀಯರಿಗೆ ಪ್ರತಿಷ್ಠಾನ 50,000 ರೂ. ಗೌರವಧನ ಹಾಗೂ ಫಲಕದೊಂದಿಗೆ ಪ್ರತಿವರ್ಷ ಪ್ರಶಸ್ತಿಪ್ರದಾನ ಮಾಡಲಿದೆ.
ಮುಂಬರುವ ದಿನಗಳಲ್ಲಿ ಶೈಕ್ಷಣಿಕ/ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಜನೆ, ವಿವಿಧ ಸ್ಪರ್ಧೆಗಳ ಏರ್ಪಾಡು, ವಿಶಿಷ್ಟ ಕೃತಿಗಳಿಗೆ ಬಹುಮಾನ ವಿತರಣೆ, ವಿಚಾರ ಸಂಕಿರಣ ಕಾರ್ಯಾಗಾರ ಹಾಗೂ ಹೊತ್ತಿಗೆಗಳ ಪ್ರಕಟಣೆ ಪ್ರತಿಷ್ಠಾನದ ಕಾರ್ಯವ್ಯಾಪ್ತಿಯಲ್ಲಿ ಬರಲಿವೆ.

ಮುದ್ದುರಾಮ
ಏನಿದು? ಯಾರೀತ ?
ಮುದ್ದುರಾಮ, ಶ್ರೀ ಕೆ ಸಿ ಶಿವಪ್ಪನವರ ಪ್ರಜ್ಞಾಪೂರ್ವಕ, ಸೂಚಕ ಮತ್ತು ಸಲಹೆಗಾರ. ಮುದ್ದುರಾಮ ಶಿವಪ್ಪನವರ ಮನಸ್ಸಿನಲ್ಲಿ ವಾಸಿಸುತ್ತಿದ್ದಾರೆ. ಮುದ್ದುರಾಮನನ್ನು ಸಂಬೋಧಿಸುತ್ತಾ, ಶಿವಪ್ಪನು ಹಲವಾರು ಚೌಪದಿಗಳನು ಹೆಣೆದಿದ್ದಾರೆ ಅದನ್ನು ಓದುಗರು ಖಂಡಿತವಾಗಿ ತಮ್ಮ ಆತ್ಮದಲ್ಲಿ ಅನುಭವಿಸುತ್ತಾರೆ ಇದು ಉತ್ಪ್ರೇಕ್ಷೆಯಲ್ಲ. ಒಂದೊಂದು ಸಾಲುಗಳು ಓದುಗರ ಆತ್ಮವನ್ನು ನಾಟುತ್ತದೆ.
– ತಾಣ ನಿರ್ವಾಹಕ
ಲೇಖಕರ ಗುರುತು ಮತ್ತು ಗೌರವ
ಡಾ. ಪ್ರಭುಶಂಕರ
ಏಪ್ರಿಲ್ 15, 2003, ಮೈಸೂರು
ಶ್ರೀ ಶಿವಪ್ಪನವರದು ಸಹಜವಾದ ಕವಿ ಹೃದಯ. ಚಿಂತನೆಯ ಸಾಹಚರ್ಯದಿಂದ ಭಾವಪೂರ್ಣವಾದ ಅವರ ಮಾತುಗಳಿಗೆ ಪರಿಭಾವನೆಯ ಮೆರಗು ದೊರೆತಿದೆ. ಭಾವದ ಅತಿರೇಕವಿಲ್ಲದೆ, ಬರಿಯ ಬುದ್ಧಿಯ ಶುಷ್ಕತೆಯಿಲ್ಲದೆ ಭಾವ ಬುದ್ಧಿಗಳ ಸರಸ ಸಾಹಚರ್ಯದಿಂದ ಇಲ್ಲಿನ ಚೌಪದಿಗಳು ಓದುಗರ ಮನಸ್ಸಿನ ಆಳಕ್ಕೆ ಇಳಿಯುವ ಶಕ್ತಿಯನ್ನು ಪಡೆದಿವೆ. ಸಮಾನಮನಸ್ಕರಾದ ಸಹೃದಯರು, ಇವರ ನಂಬಿಕೆಗಳನ್ನು ಹಂಚಿಕೊಳ್ಳಬಲ್ಲವರು ಇವುಗಳಿಂದ ರಸಾನುಭೂತಿಯನ್ನೂ ಮತಿಶಾಂತಿಯನ್ನೂ ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ.
ತಮ್ಮ ಅನೇಕಾನೇಕ ಸೇವಾಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು, ತಮ್ಮ ಭಾವನೆಗಳನ್ನು ಚಿಂತನೆಯ ಸಾಣೆಗೆ ಒಡ್ಡಿ, ಬಹುಕಾಲ ಸಹೃದಯರ ಹೃದಯ ಬುದ್ಧಿಗಳನ್ನು ಬೆಳಗಬಲ್ಲ ಮಾತಿನ ಜ್ಯೋತಿರ್ಲಿಂಗಗಳನ್ನು ಕನ್ನಡಿಗರಿಗೆ ನೀಡಿರುವ ಮಿತ್ರ ಶಿವಪ್ಪನವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳನ್ನೂ, ಕೃತಜ್ಞತೆಗಳನ್ನೂ ಅರ್ಪಿಸುತ್ತೇನೆ.
ಪ್ರೊ. ಎಂ. ಕೃಷ್ಣೇಗೌಡ
ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ ಚೌಪದಿ ಪ್ರಕಾರದ ಒಂದು ಶಿಖರ. ಮುದ್ದುರಾಮ ಅದರ ಪಡಿನೆರಳಲ್ಲ, ಪ್ರತಿಸ್ಪರ್ಧಿಯೂ ಅಲ್ಲ. ಮುದ್ದುರಾಮ, ನಿರಾಳ ಹರಿಯುವ ಒಂದು ಪನ್ನೀರ ನದಿ. ಅದರಲ್ಲಿ ಇಳಿದವನು ತಾನೇ ಕರಗಿದ್ದರೆ, ಮುದ್ದುರಾಮ ನಮಗೆ ದಕ್ಕಿತಲ್ಲವೆಂದೇ ಅರ್ಥ. ಅಂತೂ ಇದನ್ನು ಓದಿ ಹೊರಗೆ ಬಂದಮೇಲೆ ಮನಸ್ಸಿಗೊಂದು ಪನ್ನೀರ ಸ್ನಾನ! ಆಹ್ಲಾದದ ಅನುಭೂತಿ!
ಶುಚಿಯಾದ ಬದುಕು, ಅಗಾಧ ಜೀವನಪ್ರೀತಿ, ಪ್ರಗಾಧ ಲೋಕಾನುಭವ, ಸಕಾರಾತ್ಮಕ ಚಿಂತನೆ, ಸಂತರಂಥವರ ಸಹವಾಸ, ಸಂಯಮದ ನೋಟ – ಇಂಥವೆಲ್ಲ ಸೇರಿ ಇಲ್ಲೊಂದು ಚಿತ್ರಪರಿಪಾಕ ಸಿದ್ಧವಾಗಿದೆ. ಮುದ್ದುರಾಮ ಅದರ ಅಭಿವ್ಯಕ್ತಿ.
ನಮ್ಮ ನಾಡಿನ ಹಿರಿಯ ಕವಿ ಶ್ರೀ ಕೆ ಸಿ ಶಿವಪ್ಪ ಅವರು ತಮ್ಮ ಮುದ್ದುರಾಮನ ದರ್ಶನದಿಂದ ಕನ್ನಡ ಸಾಹಿತ್ಯವನ್ನು ಬಹುವಾಗಿ ಸಮೃದ್ಧಗೊಳಿಸಿದ್ದಾರೆ, ಜೀವನ್ಮುಖಿಯಾಗಿಸಿದ್ದಾರೆ. ಏನು ಮಾಡಿದರೂ ಅದನ್ನು ಸಾಧ್ಯವಾದಷ್ಟೂ ಸುಂದರವಾಗಿ, ಪರಿಪೂರ್ಣವಾಗಿ ಮಾಡಬೇಕೆಂಬುದು ಶಿವಪ್ಪನವರ ಜನ್ಮಕೊಂಡ ಗುಣ. ಆ ಗುಣವೇ ಮುದ್ದುರಾಮ ಕವಿತೆಗಳಲ್ಲಿಯೂ ಕಂಡೇ ಕಾಣುತ್ತದೆ.
ವಾಚಕರು ‘ಮುದ್ದುರಾಮ ಮಂಜರಿ’ ಕೃತಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಇಡಬಾರದು. ಬದಲಾಗಿ ನಿಮ್ಮ ಕೈ ಎಟುಕಿನಲ್ಲೇ ಇಟ್ಟುಕೊಂಡಿದ್ದು ಆಗಾಗ ತೆರೆದು ಹತ್ತೋ ಇಪ್ಪತ್ತೋ ಚೌಪದಿಗಳನ್ನು ಓದಿ, ಹತ್ತೋ ಇಪ್ಪತ್ತೋ ನಿಮಿಷ ಚಿಂತಿಸಿದರೆ, ಧ್ಯಾನಿಸಿದರೆ ಒಳ್ಳೆಯದು. ನೀವು ತುಂಬಾ ಸಂತೋಷದಲ್ಲಿದ್ದಾಗ ಅಥವಾ ಯಾವುದೇ ವ್ಯಥೆಯಲ್ಲಿದ್ದಾಗ ಇದನ್ನು ಕೈಗೆತ್ತಿಕೊಂಡರೆ ನಿಮಗೊಂದು ಮಾರ್ಗದರ್ಶನ ಅಥವಾ ಸಾಂತ್ವನ ಸಿಕ್ಕೀತು.
ಎಂ.ಪಿ. ಬಿರ್ಲಾ ಪ್ರತಿಷ್ಠಾನ ಭಾರತೀಯ ವಿದ್ಯಾ ಭವನ, ಬೆಂಗಳೂರು
ಶ್ರೀ ಕೆ.ಸಿ. ಶಿವಪ್ಪನವರ ಸಾಧನೆಯ ಕ್ಷೇತ್ರಗಳು ಹತ್ತು ಹಲವು. ಕವಿ, ಚಿಂತಕ, ಭಾಷಾಂತರಕಾರ, ಸಂಗೀತಪ್ರೇಮಿ, ಪ್ರಕಾಶಕ, ಪತ್ರಕರ್ತ, ಆಡಳಿತಗಾರ-ಹೀಗೆ. ಓದಿದ್ದು ವಿಜ್ಞಾನವಾದರೂ, ಕೈ ಹಿಡಿದದ್ದು ಸಾಂಸ್ಕೃತಿಕ ವಲಯವನ್ನು.
‘ಮುದ್ದುರಾಮನ ಮನಸು’ 1101 ಚೌಪದಿಗಳ ಸರಳ, ಸುಂದರ ಸಂಕಲನ. ಶಿವಪ್ಪನವರ ಸಮೃದ್ಧ ಜೀವನಾನುಭವಕ್ಕೂ, ದರ್ಶನಕ್ಕೂ ಹಿಡಿದ ನಿಚ್ಚಳ ಕನ್ನಡದಿಯಂತಿದೆ ಈ ಕೃತಿ. ಮಂಕುತಿಮ್ಮನ ಸೋದರನಂತಿರುವ ಮುದ್ದುರಾಮ ನಮ್ಮೊಳಗಿನಯ ವ್ಯಕ್ತರೂಪ. ಬದುಕಿನ ನಿಗೂಢತೆಯನ್ನು ಶೋಧಿಸ ಹೊರಟಿರುವ ಹಾದಿಯಲ್ಲಿ ಈತನ ಕಣ್ಣಿಗೆ ಬಿದ್ದ ಕಿರು ಹೂವೊಂದು ರಸತ್ವಕ್ಕೇರಿಬಿಡುತ್ತದೆ.
ಶಿವಪ್ಪನವರದು ಸಹಜವಾದ ಕವಿ ಹೃದಯ. ಚಿಂತನೆಯ ಸಾಹಚರ್ಯದಿಂದ ಭಾವಪೂರ್ಣವಾದ ಅವರ ಮಾತುಗಳಿಗೆ ಪರಿಭಾವನೆಯ ಮೆರಗು ದೊರೆತಿದೆ. ಭಾವದ ಅತಿರೇಕವಿಲ್ಲದೆ, ಬರಿಯ ಬುದ್ಧಿಯ ಶುಷ್ಕತೆಯಿಲ್ಲದೆ ಭಾವ ಬುದ್ಧಿಗಳ ಸರಸ ಸಾಹಚರ್ಯದಿಂದ ಇಲ್ಲಿನ ಚೌಪದಿಗಳು ಓದುಗರ ಮನಸ್ಸಿನ ಆಳಕ್ಕೆ ಇಳಿಯುವ ಶಕ್ತಿಯನ್ನು ಪಡೆದಿವೆ.

ಸನ್ಮಾನ್ಯ ಶಿವಪ್ಪರವರಿಗೆ ನಮಸ್ಕಾರಗಳು.
ತಮ್ಮ ಈ ಮುದ್ದುರಾಮ ಪ್ರತಿಷ್ಠಾನ ಇರುವಿಕೆ ಕೇಳಿಯೇ ಸಂತೋಷವಾಯಿತು.
ಸಾಮಾಜಿಕ ಕಳಕಳಿ ಹೊಂದಿರುವ ತಾವು ಈ ಕೆಲಸ ಸದ್ದಿಲ್ಲದೇ ಮಾಡುತ್ತಿರುವು ತಮ್ಮ ಜ್ಞಾನದ ಹಿರಿಮೆ ಹಾಗು ತಮ್ಮ ಜೀವನ ಅನುಭವದ ಹಿರಿಮೆಯನ್ನು ತೋರುತ್ತದೆ. ಇದು ಎಲ್ಲರಿಂದ ಸಾಧ್ಯವಾಗದ ಕೆಲಸ. ಮಾನವ, ಸಂಕಲ್ಪ ಮಾಡಿದರೆ ಏನೆಲ್ಲ ಸಾಧಿಸಬಹುದು ಎನ್ನುವುದನ್ನು ತಮ್ಮನ್ನು ನೋಡಿ ಈಗಿನ ಪೀಳಿಗೆಯ ಹಲವು ಯುವಕ ಯುವತಿಯರು ಸ್ಪೂರ್ತಿ ಹೊಂದಬೇಕು. ತಮ್ಮ ಆಶೀರ್ವಾದ ಹಾಗು ತಮ್ಮ ಮುದ್ದುರಾಮನ ಮಾತುಗಳು ಜನ-ಮನವನ್ನು ತಲುಪಬೇಕು, ತಲುಪಿ ಬದುಕಿನ ಧ್ಯೇಯ, ಸಂತೋಷ ಜೀವನ, ಸಮರಸದ ಅನುಭವ, ಸೃಜನಶೀಲ ಮನೋಭಾವ, ವಿಚಾರ ಮಂಥನ ಹಾಗು ವೈಜ್ಞಾನಿಕ ಮನೋಭಾವ ಬೆಳವಣಿಗೆಯಲ್ಲಿ ಸಹಾಯವಾಗಬೇಕು. ಸರಳ ಮುದ್ದುರಾಮ ಎಲ್ಲರಿಗೂ ತಲುಪಬೇಕು, ಎಲ್ಲರಿಗೂ ಫಲಿಸಬೇಕು, ಎಲ್ಲರಿಗೂ ದಕ್ಕಬೇಕು
ತಮ್ಮ ಈ ಪ್ರಯತ್ನಕ್ಕೆ ನನ್ನ ಕಡೆಯಿಂದ ಸಾಧ್ಯವಾದ ಮಟ್ಟಿಗೆ ನನ್ನ ಸಹಾಯ, ಬೆಂಬಲ ಎಲ್ಲಕಾದಲ್ಲೂ ಇರುತ್ತದೆ.
ತಮ್ಮ ವಿಶ್ವಾಸಿ,
ಪ್ರಶಾಂತ
ನಮ್ಮ ಜನ ಮಾನಸ ಹಾಗು ಸಮಾಜಕ್ಕೆ ಲೇಖಕರ ಕೊಡುಗೆ ಪುಸ್ತಕ ಪ್ರತಿಗಳ ರೂಪದಲ್ಲಿ
ನಿಮ್ಮ ಪ್ರತಿಯನ್ನು ಖರೀದಿಸಿ
Outside India ? ಭಾರತ ಹೊರಗಿದ್ದೀರಾ? View international editions.
ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು
ಈ ಪುಸ್ತಕಗಳು ಯಾವುದರ ಬಗ್ಗೆ?
ಸರಳವಾಗಿ ಹೇಳಬೇಕೆಂದರೆ, ನಮ್ಮ ಮನಸ್ಸಿನ ತಲ್ಲಣಗಳನ್ನು ಶಾಂತಗೊಳಿಸಿ, ವರ್ತಮಾನದಲ್ಲಿ ನೆಮ್ಮದಿಯಿಂದ ಹೇಗೆ ಬದುಕಬೇಕು ಎಂದು ದಾರಿ ತೋರಿಸುವ ಬದುಕಿನ ಕೈಗನ್ನಡಿ ಈ ಪುಸ್ತಕಗಳು.
ಈ ಪುಸ್ತಕಗಳು ಒಬ್ಬ ಜ್ಞಾನಿ ಹಾಗೂ ಅನುಭವಿ ಕವಿ ಪ್ರಕಟಿಸಿರುವ 30 ಕ್ಕೂ ಹೆಚ್ಚು ಕೃತಿಗಳ ಮಹಾಸಾರ.
ಇವು ಕೇವಲ ಸಾಲುಗಳಲ್ಲ; ಒಬ್ಬ ಕವಿ ತನ್ನ ಇಡೀ ಜೀವನದಲ್ಲಿ ಕಂಡುಕೊಂಡ ಸತ್ಯ, ಗಳಿಸಿದ ಅನುಭವ ಮತ್ತು ಇಡೀ ಬದುಕಿನ ಆಳವಾದ ತಿಳುವಳಿಕೆಯ ದರ್ಶನ. ಮನುಷ್ಯನಿಗೆ ಕಾಡುವ ಅತಿಯಾದ ಚಿಂತೆ, ಹಳೆಯ ನೆನಪುಗಳ ನೋವು, ಭವಿಷ್ಯದ ಆತಂಕಗಳಿಂದ ಹಿಡಿದು ಆತ್ಮಗೌರವ, ನಿಸ್ವಾರ್ಥ ಸೇವೆ, ಸರ್ವಧರ್ಮ ಸಮನ್ವಯ ಮತ್ತು ಪರಸ್ಪರರ ನಡುವಿನ ಸಹಭಾಗಿತ್ವದವರೆಗೆ ಬದುಕಿನ ಪ್ರತಿಯೊಂದು ಭಾವನೆಗಳನ್ನು, ಏರಿಳಿತಗಳನ್ನು ಇವುಗಳಲ್ಲಿ ಅತ್ಯಂತ ಮಾರ್ಮಿಕವಾಗಿ ಚರ್ಚಿಸಲಾಗಿದೆ.
ಇವುಗಳ ಬೆಲೆ ಏನು?
ಇದರ ಬೆಲೆ ಎಷ್ಟು ಗೊತ್ತೇ? ನಾವು ದಿನಾಲೂ ತಿನ್ನುವ ಒಂದು ಪ್ಲೇಟ್ ತಿಂಡಿಯ ಖರ್ಚಿಗಿಂತಲೂ ಕಡಿಮೆ! ಆದರೆ ನೆನಪಿಡಿ, ಹಣ ಕೊಟ್ಟು ಕಾಗದವನ್ನು ಕೊಳ್ಳಬಹುದೇ ಹೊರತು, ಈ ಪುಸ್ತಕಗಳಲ್ಲಿ ಅಡಗಿರುವ ಅಮೂಲ್ಯವಾದ ಜ್ಞಾನ ಮತ್ತು ಸಂಸ್ಕೃತಿಯನ್ನಲ್ಲ. ಆ ಮೌಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಈ ಪುಸ್ತಕಗಳಲ್ಲಿರುವ ಜ್ಞಾನ, ಸಂಸ್ಕಾರ ಮತ್ತು ಬದುಕಿನ ಮೌಲ್ಯಗಳನ್ನು ಕೊಂಡುಕೊಳ್ಳಲು ಜಗತ್ತಿನ ಯಾವುದೇ ಹಣಕ್ಕೂ ಸಾಧ್ಯವಿಲ್ಲ. ಇದರ ನಿಜವಾದ ಬೆಲೆ ನಿಮ್ಮ ದಿನನಿತ್ಯದ ಒಂದು ಹೊತ್ತಿನ ಉಪಾಹಾರದ ವೆಚ್ಚಕ್ಕಿಂತಲೂ ಕಡಿಮೆ ಇರಬಹುದು; ಆದರೆ ಇದರ ಒಳಗಿರುವ ವಿಚಾರಗಳು ಮಾತ್ರ ನಿಮ್ಮ ಇಡೀ ಬದುಕಿಗೇ ಬೆಳಕಾಗಬಲ್ಲವು
ಚೌಪದಿಗಳು ಎಂದರೇನು?
ಸರಳವಾಗಿ ಹೇಳಬೇಕೆಂದರೆ ಜೀವನದ ದೊಡ್ಡ ತತ್ವಜ್ಞಾನ, ಕಟು ಸತ್ಯ ಅಥವಾ ನೈತಿಕ ಸಂದೇಶಗಳನ್ನು ಕೇವಲ ನಾಲ್ಕೇ ಸಾಲುಗಳಲ್ಲಿ, ದಿನನಿತ್ಯದ ಉದಾಹರಣೆಗಳ ಮೂಲಕ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ನೆನಪಿಸುವ ಅತ್ಯಂತ ಜನಪ್ರಿಯ ಸಾಹಿತ್ಯ ಪ್ರಕಾರವೇ ಚೌಪದಿಗಳು.
ಚೌಪದಿಗಳು ಎಂದರೆ ಕನ್ನಡ ಸಾಹಿತ್ಯದಲ್ಲಿ ನಾಲ್ಕು ಸಾಲುಗಳಿರುವ ಒಂದು ವಿಶಿಷ್ಟವಾದ ಪದ್ಯ ಪ್ರಕಾರ (ಛಂದಸ್ಸು). ಸಂಸ್ಕೃತದಲ್ಲಿ ‘ಚತುಷ್ಪದಿ’ ಎನ್ನುವ ಪದದಿಂದ ‘ಚೌಪದಿ’ ಎಂಬ ಹೆಸರು ಬಂದಿದೆ.
ಇವುಗಳು ಹಾಡಲು ಅಥವಾ ವಾಚನ ಮಾಡಲು ಸುಲಭವಾಗುವಂತೆ ನಿರ್ದಿಷ್ಟ ಮಾತ್ರೆಗಳ ಲಯ ಮತ್ತು ಪ್ರಾಸಬದ್ಧತೆಯನ್ನು (Rhyme) ಹೊಂದಿರುತ್ತವೆ.
ಪುಸ್ತಕ ಮಾಧ್ಯಮದ ಜೊತೆಗೆ ಬೇರೆ ಮಾಧ್ಯಮಗಳೂ ಉಂಟೆ?
ಹೌದು, ಖಂಡಿತವಾಗಿಯೂ ಉಂಟು. ಇಂದಿನ ಆಧುನಿಕ ಯುಗದಲ್ಲಿ ಈ ಚೌಪದಿಗಳ ಅದ್ಭುತ ಸಂದೇಶಗಳನ್ನು ಮತ್ತು ಜೀವನದ ಸಾರವನ್ನು ಕೇವಲ ಪುಸ್ತಕಗಳಿಗಷ್ಟೇ ಸೀಮಿತಗೊಳಿಸದೆ, ಜನರ ಅಭಿರುಚಿಗೆ ತಕ್ಕಂತೆ ವಿವಿಧ ಮಾಧ್ಯಮಗಳ ಮೂಲಕ ತಲುಪಿಸಲು ವಿಶಾಲವಾದ ಅವಕಾಶಗಳಿವೆ.
ಆಡಿಯೋ ಬುಕ್ಸ್ ಮತ್ತು ಪಾಡ್‌ಕಾಸ್ಟ್‌ಗಳು (Audiobooks & Podcasts) ಇಂದಿನ ವೇಗದ ಬದುಕಿನಲ್ಲಿ ಜನರಿಗೆ ಓದಲು ಸಮಯ ಸಿಗದಿದ್ದಾಗ, ಚೌಪದಿಗಳನ್ನು ಮಧುರವಾದ ಧ್ವನಿಯಲ್ಲಿ ರೆಕಾರ್ಡ್ ಮಾಡಿ, ಅವುಗಳ ಜೀವನ ವಿಶ್ಲೇಷಣೆಯನ್ನು ಪಾಡ್‌ಕಾಸ್ಟ್‌ಗಳ ರೂಪದಲ್ಲಿ (Spotify, YouTube Music ಮುಂತಾದವುಗಳಲ್ಲಿ) ಪ್ರಸಾರ ಮಾಡಬಹುದು. ಇದು ಪ್ರಯಾಣ ಮಾಡುವಾಗ ಅಥವಾ ಕೆಲಸದ ನಡುವೆ ಕೇಳಲು ಪ್ರಕೃತಿಪ್ರಿಯರಿಗೆ ಹಾಗೂ ಯುವ ಪೀಳಿಗೆಗೆ ತುಂಬಾ ಇಷ್ಟವಾಗುತ್ತದೆ.
ವಿಡಿಯೋ ಸರಣಿಗಳು (Video Series/Reels) ಪ್ರತಿಯೊಂದು ಚೌಪದಿಯ ಆಳವಾದ ಅರ್ಥವನ್ನು ತಿಳಿಸುವ ಚಿಕ್ಕ ಚಿಕ್ಕ ಅನಿಮೇಷನ್ ವಿಡಿಯೋಗಳು, ಕಥೆಯ ರೂಪದ ದೃಶ್ಯಗಳು ಅಥವಾ ಶಾಂತವಾದ ಹಿನ್ನೆಲೆ ಸಂಗೀತದೊಂದಿಗೆ ವಾಚನ ಮಾಡುವ ಕಿರು ವಿಡಿಯೋಗಳನ್ನು (YouTube Shorts, Instagram Reels) ಸೃಷ್ಟಿಸಬಹುದು.
ಸಂಗೀತ ಮತ್ತು ಗಾಯನ (Musical Albums) ಈ ಚೌಪದಿಗಳು ಸುಂದರವಾದ ಲಯ ಮತ್ತು ಪ್ರಾಸವನ್ನು ಹೊಂದಿರುವುದರಿಂದ, ಇವುಗಳನ್ನು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಅಥವಾ ಭಾವಗೀತೆಗಳ ರೂಪದಲ್ಲಿ ಸಂಯೋಜಿಸಿ ಗಾಯನ ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಿಸಬಹುದು. ಸಂಗೀತದ ಮೂಲಕ ತತ್ವಜ್ಞಾನವು ಮನಸ್ಸಿಗೆ ಬೇಗನೆ ಹತ್ತಿರವಾಗುತ್ತದೆ.
ಚಿತ್ರಕಲೆ ಮತ್ತು ಕ್ಯಾಲಿಗ್ರಫಿ (Art & Calligraphy) ಚೌಪದಿಗಳಲ್ಲಿ ಬಳಕೆಯಾಗಿರುವ ಮಾವು, ಪೊರಕೆ, ಕೆರೆ ಅಥವಾ ಮುಳ್ಳಿನ ಹಲಸಿನ ಹಣ್ಣಿನಂತಹ ಅದ್ಭುತ ರೂಪಕಗಳನ್ನು ಸುಂದರವಾದ ಚಿತ್ರಗಳನ್ನಾಗಿ ಬಿಡಿಸಿ, ಅದರ ಕೆಳಗೆ ಆ ಸಾಲುಗಳನ್ನು ಬರೆಯಬಹುದು. ಇವುಗಳನ್ನು ಕಲಾ ಪ್ರದರ್ಶನಗಳಲ್ಲಿ (Art Exhibitions) ಅಥವಾ ಆನ್‌ಲೈನ್ ಗ್ಯಾಲರಿಗಳಲ್ಲಿ ಪ್ರದರ್ಶಿಸಬಹುದು.
ಏಕೆ ಈ ಚೌಪದಿಗಳನ್ನು ಜನ ಇಷ್ಟ ಪಡುತ್ತಾರೆ?
ಸರಳ ಭಾಷೆ, ಆಳವಾದ ಅರ್ಥ ಇವುಗಳಲ್ಲಿ ಯಾವುದೇ ಕಠಿಣವಾದ ಪಾಂಡಿತ್ಯದ ಭಾಷೆ ಇರುವುದಿಲ್ಲ. ಸಾಮಾನ್ಯ ಜನರಿಗೂ ಅರ್ಥವಾಗುವ ನಿತ್ಯ ಜೀವನದ ಕನ್ನಡದಲ್ಲೇ ಬರೆದಿದ್ದರೂ, ಅವು ನೀಡುವ ಸಂದೇಶ ಮಾತ್ರ ಬದುಕಿನ ಪರಮ ಸತ್ಯವಾಗಿರುತ್ತದೆ.
ದಿನನಿತ್ಯದ ಸುಂದರ ರೂಪಕಗಳು ಕವಿ ಇಲ್ಲಿ ಮಾವಿನ ಹಣ್ಣು, ಪೊರಕೆ, ಹಲಸಿನ ಹಣ್ಣು, ಹುಚ್ಚು ಕುದುರೆ ಅಥವಾ ಕೆರೆಯಂತಹ ನಮ್ಮ ಕಣ್ಣಮುಂದಿನ ಉದಾಹರಣೆಗಳನ್ನು ಬಳಸುತ್ತಾರೆ. ಇಂತಹ ರೂಪಕಗಳು ನೇರವಾಗಿ ಜನರ ಹೃದಯ ಮುಟ್ಟುತ್ತವೆ ಮತ್ತು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ.
ನಮ್ಮದೇ ಬದುಕಿನ ಕಥೆ ಈ ಚೌಪದಿಗಳನ್ನು ಓದಿದಾಗ ಪ್ರತಿಯೊಬ್ಬರಿಗೂ “ಇದು ನನ್ನದೇ ಮನಸ್ಸಿನ ಕಥೆ, ನನಗೇ ಹೇಳಿದಂತಿದೆ” ಎಂಬ ಭಾವನೆ ಮೂಡುತ್ತದೆ. ಮನುಷ್ಯನಿಗೆ ಕಾಡುವ ಚಿಂತೆ, ಅಸೂಯೆ, ಸಂಬಂಧಗಳ ಬಿರುಕು ಮತ್ತು ಆತಂಕಗಳಿಗೆ ಇವುಗಳಲ್ಲಿ ಸಾಂತ್ವನ ಸಿಗುತ್ತದೆ.
ಯಾವ ಕಾಲಕ್ಕೂ ಸಲ್ಲುವ ಸಾರ್ವತ್ರಿಕ ಸತ್ಯ (Universal Wisdom) ಧರ್ಮ, ದಯೆ, ಸ್ವಾಭಿಮಾನ, ಮತ್ತು ವರ್ತಮಾನದಲ್ಲಿ ಬದುಕುವ ಕಲೆಯ ಬಗ್ಗೆ ಇವು ಮಾತನಾಡುವುದರಿಂದ, ಈ ವಿಚಾರಗಳು ಯಾವುದೇ ಒಂದು ಜಾತಿಗೆ ಅಥವಾ ಕಾಲಕ್ಕೆ ಸೀಮಿತವಾಗಿರದೆ, ಎಲ್ಲ ಕಾಲದ ಮಾನವರಿಗೂ ದಾರಿದೀಪವಾಗಿವೆ.
ನೆಮ್ಮದಿ ನೀಡುವ ಮಾರ್ಗದರ್ಶಿ ಇಂದಿನ ಒತ್ತಡದ ಜಗತ್ತಿನಲ್ಲಿ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಹೇಗೆ, ಅಹಂಕಾರವನ್ನು ಬಿಟ್ಟು ಸಮಾಜದೊಂದಿಗೆ ಸಹಭಾಗಿತ್ವದಲ್ಲಿ ಹೇಗೆ ಬಾಳಬೇಕು ಎಂದು ಪ್ರೀತಿಯಿಂದ ಹಿತವಚನ ಹೇಳುವ ಆತ್ಮೀಯ ಸ್ನೇಹಿತನಂತೆ ಈ ಸಾಲುಗಳು ಕೆಲಸ ಮಾಡುತ್ತವೆ.
ನಾವು ಹೇಗೆ ಸಂಪರ್ಕಿಸಬೇಕು ?
ಮುದ್ದುರಾಮ ಪ್ರತಿಷ್ಠಾನ (ರೀ)
ಮೈಸೂರು +91-9353746462
muddurama2022@gmail.com
1706, 2ನೇ ಮುಖ್ಯ, ಎಫ್-ಬ್ಲಾಕ್, ಕನಕದಾಸ ನಗರ, ಮೈಸೂರು 570033