ಈ ಹಾಡಿನ ಸಾಹಿತ್ಯ ರಾಗ ರತಿ ಆಲ್ಬಮ್‌ನ “ಹೇಗೆ ತಿಳಿಸಲಿ” ಎಂಬ ಸುಂದರವಾದ ಭಾವಗೀತೆ. ಇದನ್ನು ಕೆ.ಸಿ. ಶಿವಪ್ಪ ಅವರು ಬರೆದಿದ್ದು, ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಎಸ್.ಪಿ. ಶೈಲಜಾ ಅವರು ಹಾಡಿದ್ದಾರೆ.

( ನಗುವ ನಗೆ )
ಹೇಗೆ ತಿಳಿಸಲಿ ಮೊದಲ ಸುಖವನ್ನು ಬಯಕೆ ಚಿಮ್ಮಿದ ಪರಿಯನು… ।।

ತೀರದಾಸೆಯ ಭಾವ ಜಾಡಿನ ಕನಸು ಚಿಗುರಿದ ನೆಲೆಯನು ।।
ಅಂಗ ಸಂಗದ ಸುಮನ ಮೋಹನ ।। ರಾಗ ನುಡಿಸಿದ ಕಲುಪನು…
ಹೇಗೆ ತಿಳಿಸಲಿ ಮೊದಲ ಸುಖವನ್ನು ಬಯಕೆ ಚಿಮ್ಮಿದ ಪರಿಯನು…

ಒಲವ ಸುಖವನ್ನು ಗುಣಿಸಿ ತೋರುತ ಒಡಲು ಹಚ್ಚಿದ ಬಿಸಿಯನು ।।
ಸರಸ ಸನಿಹದ ಕುಸುಮ ಚೆಲ್ಲುತ ।। ರಜನಿ ನಾಟಿದ ಚೆಲುವನು…
ಹೇಗೆ ತಿಳಿಸಲಿ ಮೊದಲ ಸುಖವನ್ನು ಬಯಕೆ ಚಿಮ್ಮಿದ ಪರಿಯನು…

ನೆನಪು ನಿನ್ನಯ ಮನವ ತುಂಬಿಸಿ ದೀಪ ಬೆಳಗಿದ ಸೊಗವನು ।।
ಸಂಜೆ ಗೆಂಪಿನ ಮೋಹ ಚುಂಬಿಸಿ ।। ಆದ ಅಮಲಿನ ಕತೆಯನು …

ಹೇಗೆ ತಿಳಿಸಲಿ ಮೊದಲ ಸುಖವನ್ನು ಬಯಕೆ ಚಿಮ್ಮಿದ ಪರಿಯನು… ।।