ಕಾರುಣ್ಯ ಮರೆಯಾದ ಧರ್ಮ ಇಲ್ಲಾವುದಿದೆ?
ಅರಿತು ಜೊತೆಗೂಡುವುದೆ ನೀತಿಸಂಹಿತೆಯೊ!
ಯಾರಿಗೇನಿಷ್ಟವೋ ಪೂಜಿಸಲಿ ಬಿಡು ಅದನು.,
ಗುಡಿಗೆಲ್ಲಿ ಗಡಿರೇಖೆ? – ಮುದ್ದುರಾಮ

ದೇಶದೇಶಗಳೆಲ್ಲ ಸಮರ ಷಡ್ಯಂತ್ರಕ್ಕೆ
ತಡೆಹಾಕಿದರೆ ಜಗಕೆ ಎಷ್ಟೊಂದು ಕ್ಷೇಮ!
ಮೀಸಲಿಡಬಹುದು ಈ ಹಣ ಜನರೊಳಿತಿಗಾಗಿ.,
ಕದನಪ್ರಿಯರೇ ನಾವು? – ಮುದ್ದುರಾಮ