ಇದು ರಾಗ ರತಿ ಆಲ್ಬಮ್‌ನ ಮತ್ತೊಂದು ಸುಂದರ ಗೀತೆ “ನೀ ನಡೆವ ಹಾದಿಯಲ್ಲಿ”. ಕೆ.ಸಿ. ಶಿವಪ್ಪ ಅವರು ಬರೆದಿರುವ ಈ ಕವನಕ್ಕೆ ವಿಜಯಭಾಸ್ಕರ್ ಅವರ ಸಂಗೀತವಿದ್ದು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಪಿ. ಶೈಲಜಾ ಅವರು ಜೊತೆಯಾಗಿ ಹಾಡಿದ್ದಾರೆ.

ನೀ ನಡೆವ ಹಾದಿಯಲ್ಲಿ

ನೀ ನಡೆವ ಹಾದಿಯಲ್ಲಿ ತಲೆಗೆ ನೀರ ಕೊಡೆಯಾಗಿ
ಹಿತ ನೆರಳ ತರುವಾಸೆ…

ನೀ ನಿದ್ದೆ ಹೋದಾಗ ಮೆತ್ತನೆಯ ದಿಂಬಾಗಿ
ತೋಳ ಚಾಚುವ ಆಸೆ…

ದಹಿಸಿ ಪಸುಡು ಬಿಸಿಲಿನಲ್ಲಿ ಪನ್ನೀರ ಕಂಪಾಗಿ
ದಾಹ ತಣಿಸುವ ಆಸೆ… ।।

ಸಿಂಗಾರ ತರುವಲ್ಲಿ ಮಲ್ಲಿಗೆಯ ಹೂವಾಗಿ
ಅತಿ ಮೆರೆವ ಹಿರಿಯಾಸೆ…

ನೀ ನಿದ್ದೆ ಹೋದಾಗ ಮೆತ್ತನೆಯ ದಿಂಬಾಗಿ
ತೋಳ ಚಾಚುವ ಆಸೆ…

ಆವೇಶ ಕೋಪವಿರೆ ಶೀತಲದ ಹಿಮವಾಗಿ
ಸಂತೈಪ ಅಭಿಲಾಷೆ…।।

ಅನುರಾಗ ದರ್ಪಣದಿ ದರ್ಶನದ ಗಾಜಾಗಿ
ಬಿಂಬಿಸುವ ಕಟ್ಟಾಸೆ…

ನೀ ನಿದ್ದೆ ಹೋದಾಗ ಮೆತ್ತನೆಯ ದಿಂಬಾಗಿ
ತೋಳ ಚಾಚುವ ಆಸೆ…

ನೀ ಬರೆವ ಕವಿತೆಯಲ್ಲಿ ರಾಗವನ್ನು ತುಂಬಿಡುವ
ನನಗಿದಿನ್ನೋದಾಸೆ …

ನಗುಮೊಗದ ಅರಳಿಕೆಗೆ ಚುಂಬನದ ತುಟಿಯಾಗಿ
ಮುತ್ತಿಡುವ ಕೊನೆಯಾಸೆ…

ನೀ ನಡೆವ ಹಾದಿಯಲ್ಲಿ ತಲೆಗೆ ನಿರಿ ಕೊಡೆಯಾಗಿ
ಹಿತ ನೆರಳ ತರುವಾಸೆ…

ನೀ ನಿದ್ದೆ ಹೋದಾಗ ಮೆತ್ತನೆಯ ದಿಂಬಾಗಿ
ತೋಳ ಚಾಚುವ ಆಸೆ…