ಮೂಡಿ ಬಂದೆ ಅಂದು ನೀನು
ಎನ್ನ ಬಾಳ ಬಾನಿನಲ್ಲಿ ಓ ಉಷಾ…ಓ ಉಷಾ…||

ರಾಗರಸದ ಒಲವ ತುಂಬಿ ಪ್ರೀತಿ ಕದವ ತೆರೆದೆ ನೀನು ।।
ಬೆಳಕ ಚೆಲ್ಲಿ ಚೆಲುವ ಸೂಸಿ ಆದೆ ನೀನು ದೀಪದೊಡತಿ
ಮೂಡಿ ಬಂದೆ ಅಂದು ನೀನು ಎನ್ನ ಬಾಳ ಬಾನಿನಲ್ಲಿ ಓ ಉಷಾ…ಓ ಉಷಾ…

ಪ್ರಣಯ ತೊರೆಯ ಸುಗಮ ಹಾದಿ ಮನದ ಸೊಗದ ವಿಮಲ ಧಾರೆ ।।
ನಿನ್ನ ಉದಯ ಗಗನಕೇರಿ ನಿನ್ನ ನಯನ ರತಿಯ ಮಾಡಿ
ಮೂಡಿ ಬಂದೆ ಅಂದು ನೀನು ಎನ್ನ ಬಾಳ ಬಾನಿನಲ್ಲಿ ಓ ಉಷಾ… ಓ ಉಷಾ…

ಬೆಳಗು ಬಣ್ಣ ಬಲಿದ ಚಿಲುಮೆ ಯುಗದ ಆದಿ ಮಮತೆ ಚಿಗುರು ।।
ಮೋಹ ಬರೆದ ಚಾರು ಚಿತ್ರ ರಸಿಕ ಭಾವ ಕವಿತೆ ನೀನು
ಮೂಡಿ ಬಂದೆ ಅಂದು ನೀನು ಎನ್ನ ಬಾಳ ಬಾನಿನಲ್ಲಿ ಓ ಉಷಾ… ಓ ಉಷಾ…