ರಾಗ ರತಿ ಆಲ್ಬಮ್‌ನ ಮತ್ತೊಂದು ಅತ್ಯಂತ ಸುಂದರವಾದ ಹಾಗೂ ಲವಲವಿಕೆಯಿಂದ ಕೂಡಿರುವ ಗೀತೆ “ಕಾಜಾಣ ಕೋಗಿಲೆಯೇ”. ಕೆ.ಸಿ. ಶಿವಪ್ಪ ಅವರು ಬರೆದಿರುವ ಈ ಕವನಕ್ಕೆ ವಿಜಯಭಾಸ್ಕರ್ ಅವರು ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದ್ದು, ಇದನ್ನು ಎಸ್.ಪಿ. ಶೈಲಜಾ ಅವರು ತಮ್ಮ ಮಧುರ ಕಂಠದಲ್ಲಿ ಹಾಡಿದ್ದಾರೆ.

ಕಾಜಾಣ ಕೋಗಿಲೆಯೇ ಸಂಗೀತ ಸವಿ ಮಧುವೆ
ಎಂದೆಲ್ಲ ಹೊಗಳುತ್ತ ನಸುನಗುತಾ ಬಳಿಬಂದು
ಕಚಗುಳಿಯ ಇಟ್ಟವನ ಮುದದಿಂದ ನಾ ನೆನೆವೆ…।।

ಕಮನೀಯ ಕಲಹಂಸ ಸಂಗಾತಿ ಸಾರಂಗ
ಅನುರೂಪ ಪದಕಗಳ ಎದೆತುಂಬ ತಂದಿತ್ತ ।।
ಅಭಿಮಾನಿ ಕಾದಲನ ನಾ ನೆನೆಯದಿರಲಾರೆ…

ಕಾಜಾಣ ಕೋಗಿಲೆಯೇ ಸಂಗೀತ ಸವಿ ಮಧುವೆ
ಎಂದೆಲ್ಲ ಹೊಗಳುತ್ತ ನಸುನಗುತಾ ಬಳಿಬಂದು
ಕಚಗುಳಿಯ ಇಟ್ಟವನ ಮುದದಿಂದ ನಾ ನೆನೆವೆ…

ಇರುಳಿನಲ್ಲಿ ಮಬ್ಬಿನಲ್ಲಿ ತರತರದಿ ರಮಿಸುತ್ತ
ಅಪ್ಪುಗೆಯ ಅತಿ ಬಿಸಿಗೆ ಮಾದಕತೆ ಕೂಡಿಸಿದ ।।
ರಾಸ-ರುಚಿ ರಂಜಕನ ಮುದದಿಂದ ನಾ ನೆನೆವೆ…

ಕಾಜಾಣ ಕೋಗಿಲೆಯೇ ಸಂಗೀತ ಸವಿ ಮಧುವೆ
ಎಂದೆಲ್ಲ ಹೊಗಳುತ್ತ ನಸುನಗುತಾ ಬಳಿಬಂದು
ಕಚಗುಳಿಯ ಇಟ್ಟವನ ಮುದದಿಂದ ನಾ ನೆನೆವೆ…

ತಿಳಿನಗೆಯ ತೆಪ್ಪದಲ್ಲಿ ದುಃಖವನ್ನು ತೇಲಿಬಿಡು
ಎಂದೆನುತ ಹಿತನುಡಿದು ನೀ ಹೋದೆ ಮಹನೀಯ ।।
ನಾ ನಿನ್ನ ನೆನೆಯುವೆನು ಇನ್ನಷ್ಟು ನವದಿಂದ…

ಕಾಜಾಣ ಕೋಗಿಲೆಯೇ ಸಂಗೀತ ಸವಿ ಮಧುವೆ
ಎಂದೆಲ್ಲ ಹೊಗಳುತ್ತ ನಸುನಗುತಾ ಬಳಿಬಂದು
ಕಚಗುಳಿಯ ಇಟ್ಟವನ ಮುದದಿಂದ ನಾ ನೆನೆವೆ… ।।